ತೀರ್ಥಹಳ್ಳಿಯ ಎಳ್ಳಮವಾಸಿ ಜಾತ್ರಿಯ ಕೆಲಸಕ್ಕಾಗಿ ಮಹಾರಾಷ್ಟ್ರದ ಅಮರಾವತಿಯಿಂದ ಬಂದಿದ್ದ ಯುವಕ ತುಂಗಾ ನದಿಯಲ್ಲಿ ಈಜಲು ಹೋಗಿ ಕಣ್ಮರೆಯಾಗಿರುವಾಗ ಘಟನೆ ತೀರ್ಥಹಳ್ಳಿಯ ರಾಮೇಶ್ವರ ಮೀಲ್ ಹಿಂಭಾಗದಲ್ಲಿ ಗುರುವಾರ ನಡೆದಿದೆ. ನೀರಿನಲ್ಲಿ ನಾಪತ್ತೆಯಾದ ಯುವಕನನ್ನು ಮಹಾರಾಷ್ಟ್ರದ ಅಮರಾವತಿಯ 18 ವರ್ಷದ ವಿಕಾಸ್ ಬೋಸ್ಲೆ ಎಂದು ತಿಳಿದುಬಂದಿದೆ. ಮಧ್ಯಾಹ್ನ ಈಜಲು ತೆರಳಿದ್ದ ವಿಕಾಸ್ ನೀರಿನ ಸೆಳೆತ ಹೆಚ್ಚಾಗಿರುವುದರಿಂದ ನೀರಿನಿಂದ ಹೊರಬರಲು ಪ್ರಯತ್ನ ಪಟ್ಟರು ಸಹ ನೀರಿನಿಂದ ಹೊರಬರಲು ಆಗದೆ ಮುಳುಗಿರುವುದಾಗಿ ಅಲ್ಲಿದ್ದ ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.