ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಜಲಾಶಯ ಬಳಿ ಸಚಿವ ಡಿ.ಸುಧಾಕರ್ ಹೇಳಿಕೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ತ್ವರಿತವಾಗಿ ಚಾನಲ್ ಗೆ ನೀರು ಹರಿಸುವ ಕಾರ್ಯವಾಗುತ್ತೆ, ಭದ್ರಾ ಮೇಲ್ದಂಡೆ ಅಕ್ಟೇಡಕ್ಟ್ ಗೆ ನೀರು ಹರುತ್ತೇವೆ. ಪ್ರಾಯೋಗಿಕವಾಗಿ ಗೋನೂರು ವರೆಗೆ ನೀರು ಹರಿಸುವ ಕಾರ್ಯ ಮಾಡ್ತೇವೆ. ಸಿಎಂ, ಡಿಸಿಎಂ ಜೊತೆ ಸಭೆ, ಹಿನ್ನೀರ ರೈತರ ಸಮಸ್ಯೆ ಬಗೆಹರಿದಿದೆ ಎಂದರು. ಅಲ್ಲದೆ ಇದೇ ವೇಳೆ ಮಾತನಾಡಿದ ಅವರು ಬಳ್ಳಾರಿಯಲ್ಲಿ ಗಲಾಟೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದರು. ಬಳ್ಳಾರಿಯಲ್ಲಿ ಈ ಥರ ಸಣ್ಣ ಪುಟ್ಟ ಗಲಾಟೆ ಆಗ್ತಾವೆ, ಇಂಥ ಘಟನೆಗಳು ಹೊಸದೇನೂ ಅಲ್ಲ ಬಿಜೆಪಿ ಸರಕಾರದ ಅವಧಿಯಲ್ಲಿ ದೌರ್ಜನ್ಯಗಳಾದವು ಬಳ್ಳಾರಿ ಜನರನ್ನು ಒಕ್ಕಲೆಬ್ಬಿಸಿದ್ರು ಎಂದರು.