ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಹುಬ್ಬಳ್ಳಿಯ ವಿಕಾಸ ನಗರದಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲವರು ಗುಂಪಾಗಿ ಬಂದು ಹಲ್ಲೆ ಮಾಡಿದ್ದಾರೆ.ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಿಂತಾಗ ತಾನು ದುಡಿದ ಹಣ ಕೇಳಿದ್ದಕ್ಕೆ ಮಾಲೀಕ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾನಂತೆ. ಈ ಘಟನೆ ಹುಬ್ಬಳ್ಳಿಯ ಹೊಸೂರ ಬಳಿ ಇರುವ ವಿಕಾಸ ನಗರದಲ್ಲಿ ನಡೆದಿದೆ. ಇವರೆಲ್ಲ ಯಾರು? ಯಾತಕ್ಕಾಗಿ ಜಗಳವಾಡಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.