ಹುಮ್ನಾಬಾದ್: ಡಾ. ಅಂಬೇಡ್ಕರ್ ತತ್ವ ಆದರ್ಶ ಪಾಲನೆ ಅನಿವಾರ್ಯ ನಗರದಲ್ಲಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜಿ.ಕೆ ಗೋಖಲೆ
ಡಾ. ಅಂಬೇಡ್ಕರ್ ತತ್ವ ಆದರ್ಶಗಳ ಪಾಲನೆ ಅವಶ್ಯ ಮಾತ್ರ ಅಲ್ಲ ಅನಿವಾರ್ಯವೂ ಹೌದು ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಜಿ.ಕೆ ಗೋಖಲೆ ಅವರು ಸಲಹೆ ನೀಡಿದರು. ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ಮಧ್ಯಾಹ್ನ 3ಕ್ಕೆ ಸಂವಿಧಾನ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಸಂವಿಧಾನ ಪೀಠಿಕೆ ಫಲಕ ಅನಾವರಣಗೊಳಿಸಿ ಮಾತನಾಡಿದರು. ಪ್ರಾಚಾರ್ಯ ಪ್ರಾಚಾರ್ಯ ಡಾ. ವೀರಣ್ಣ ತುಪ್ಪದ್ ಅಧ್ಯಕ್ಷತೆ ವಹಿಸಿದ್ದರು.