ಯಲ್ಲಾಪುರ: ತಾಲೂಕಿನ ಆನಗೋಡದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ಸಾಲಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಖ್ಯಾತ ಪರಿಸರ ಬರಹಗಾರ ಶಿವಾನಂದ ಕಳವೆ ನೆಲದ ನೈಸರ್ಗಿಕ ಕೌತುಕ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ ವಿದ್ಯಾರ್ಥಿಗಳು ಯಾವದೇ ರಿಲ್ಸ್ ಮೋಹಕ್ಕೆ ಒಳಗಾಗದೇ,ನಾವು ಬೆಳದು ಬಂದ ನಮ್ಮ ಊರಿನ ಕೌತುಕದ ಕಥೆ ಗಳನ್ನು ಕೇಳಬೇಕುನಮ್ಮ ಊರಿನ ಎಷ್ಟೋ ಹೆಸರಿನಲ್ಲಿ ಒಂದೊಂದು ಇತಿಹ್ಯ ಇದೆ.ನಮ್ಮ ನೆಲದ ಚರಿತ್ರೆ ಯನ್ನು ಅರಿಯಬೇಕು ಎಂದರು ಅನಗೋಡ ಸುದರ್ಶನ್ ಪ್ರತಿಷ್ಠಾನ ದ ಅಧ್ಯಕ್ಷ ಗಣಪತಿ ಮಾನಿಗದ್ದೆ ಮಾತನಾಡಿ ಯುವಕರು ಮತ್ತು ಸಂಸ್ಕೃತಿ ಕುರಿತು ಮಾತನಾಡಿದರು