ಯಲ್ಲಾಪುರ: ೩೯ ನೇ ವರ್ಷದ ಸಂಕಲ್ಪ ಉತ್ಸವವು ಕನ್ನಡ ಜೀವನ ಹಬ್ಬ ಮತ್ತು ಸಂಸ್ಕೃತಿ ಸುಗ್ಗಿಯ ಪರಿಕಲ್ಪನೆಯಲ್ಲಿ ಅ. ೩೧ ರಿಂದ ನ.೪ ರವರೆಗೆ ಪಟ್ಟಣದ ಗಾಂಧಿ ಕುಟೀರದಲ್ಲಿ ನಡೆಯಲಿದೆ ಎಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು. ಸಂಕಲ್ಪ ಉತ್ಸವದಲ್ಲಿ ಯಕ್ಷಗಾನ ,ತಾಳಮದ್ದಳೆ, ಭರತನಾಟ್ಯ, ಗಮಕವಾಚನ,ಪುಸ್ತಕ ಬಿಡುಗಡೆ,ಭಜನೆ,ಕೀತನೆ,ರಾಷ್ಟ್ರಭಕ್ತಿ ಕಾಯಕ್ರಮ, ನಿವೃತ್ತ ಸೈನಿಕರಿಗೆ ಮತ್ತು ಸಾಧಕರಿಗೆ ಸನ್ಮಾನ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.ಅ.೩೧ರಂದು ಸಂಜೆ ೫.೩೦ಕ್ಕೆ ಸ್ವಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹಾಗೂ ಎಡನೀರು ಮಠದ ಸಚ್ಚಿದಾನಂದ ಭಾರತೀಸ್ವಾಮಿಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶಾಸಕ ಶಿವರಾಮ ಹೆಬ್ಬಾರ,ಎಂ ಎಲ್ ಸಿ ಶಾಂತಾರಾಮ ಸಭಾಗವಹಿಸಲಿದ್ದಾರೆ.