ಹುಬ್ಬಳ್ಳಿಯ ಗೋಕುಲ್ ರಸ್ತೆಯ ಬಸವ ಕೇಂದ್ರದ ವತಿಯಿಂದ ಜರುಗಿದ ವಿಶ್ವ ಬಸವಧರ್ಮ ಪ್ರವಚನ ಕಾರ್ಯಕ್ರಮದಲ್ಲಿ ಶಾಸಕರಾದ ಮಹೇಶ್ ಟೆಂಗಿನಕಾಯಿ ಅವರು ಭಾಗವಹಿಸಿ, ದಿವ್ಯ ಸಾನಿಧ್ಯ ವಹಿಸಿದ ಯಮಕನಮರಡಿಯ ಶ್ರೀ ಜಗದ್ಗುರು ಶೂನ್ಯಸಂಪಾದನ ಪೀಠದ ಪೂಜ್ಯ ಶ್ರೀ ಸಿದ್ಧಬಸವ ದೇವರ ಆಶೀರ್ವಾದ ಪಡೆದುಕೊಂಡರು. ವಿಶ್ವದಾದ್ಯಂತ ಮಾನವ ಸಮುದಾಯದಲ್ಲಿ ಏಕತೆ ಮತ್ತು ಸಮಾನತೆ ತರಲು, ಮನಸ್ಸಿನ ಶಾಂತಿ ಮತ್ತು ಆತ್ಮೋದ್ದಾರಕ್ಕಾಗಿ ಬಸವ ಧರ್ಮದ ಸಂದೇಶಗಳ ಮಹತ್ವದ ಕುರಿತು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಾಹಿತಿಗಳು ಹಾಗೂ ಬಸವ ಕೇಂದ್ರದ ಪ್ರಮುಖರು ಉಪಸ್ಥಿತರಿದ್ದರು.