ಚಳ್ಳಕೆರೆ: ಪರಶುರಾಂಪುರ ಹೊಸ ಎಸಿ ಕಾಲೋನಿಯಲ್ಲಿ ಗೊಬ್ಬು ನಾರುತ್ತಿರುವ ಚರಂಡಿ; ಗ್ರಾಮಸ್ಥರು ಆಕ್ರೋಶ
ತಾಲ್ಲೂಕಿನ ಪರಶುರಾಂಪುರ ಹೊಸ ಎಸಿ ಕಾಲೋನಿಯಲ್ಲಿ ಚರಂಡಿ ಸ್ವಚ್ಛತೆಯಿಲ್ಲದೆ ಗೊಬ್ಬುನಾರುತ್ತಿರುವುದರಿಂದ ಶುಕ್ರವಾರ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಚರಂಡಿಗಳು ಸ್ವಚ್ಛತೆ ಮಾಡದೆ ಹೂಳು, ಘನತ್ಯಾಜ್ಯ ವಸ್ತುಗಳು ತುಂಬಿಕೊಂಡು ಗೊಬ್ಬುನಾರುತ್ತಿವೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಕೂಡಲೇ ಸಂಬಂಧಿಸಿದ ಗ್ರಾಪಂ ಅಧಿಕಾರಿಗಳು ಚರಂಡಿ ಸ್ವಚ್ಛತೆ ಮಾಡಿಸಬೇಕು ಎಂದು ಗ್ರಾಮಸ್ಥರಾದ ತಿಪ್ಪೇಸ್ವಾಮಿ, ಮಾರುತಿ, ಚಂದ್ರಣ್ಣ, ಬಸವರಾಜು, ರಂಗಸ್ವಾಮಿ, ಮಮತ,ಶಾರದಮ್ಮ ಪುಟ್ಟಮ್ಮ,ಲಲಿತಮ್ಮ ಒತ್ತಾಯ ಮಾಡಿದ್ದಾರೆ.