ಆಳಂದ: ನಿಂಬರ್ಗಾದಲ್ಲಿ ತನಗೆ ಸಿಕ್ಕ ಮೊಬೈಲ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿಗೆ ಪೊಲೀಸ್ರಿಂದ ಗೌರವ
ಆಳಂದ ತಾಲೂಕಿನ ನಿಂಬರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್ ಸಿಕ್ಕಿದ್ದು, ಅದನ್ನು ಪ್ರಾಮಾಣಿಕತೆಯಿಂದ ಠಾಣೆಗೆ ಒಪ್ಪಿಸಿದ ವ್ಯಕ್ತಿಯನ್ನು ನಿಂಬರ್ಗಾ ಪಿಎಸ್ಐ ಅವರು ಸನ್ಮಾನಿಸಿ ಗೌರವಿಸುವ ಮೂಲಕ ಶ್ಲಾಘಿಸಿದರು. ಬಳಿಕ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು. ನಾಗರಿಕನ ಈ ನಿಷ್ಠಾವಂತ ನಡೆಗೆ ಶೆನಿವಾರ 4 ಗಂಟೆಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದರು.