ತೀರ್ಥಹಳ್ಳಿ: ನಾಲೂರ್ ಸಮೀಪ ಕಾರಿನ ಮೇಲೆ ಹಾರಿದ ಕಾಡುಕೋಣ, ಪ್ರಯಾಣಿಕರು ಜಸ್ಟ್ ಮಿಸ್
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಹೋಬಳಿ ನಾಲೂರ್ ಸಮೀಪದಲ್ಲಿ ಚಲಿಸುತಿದ್ದ ಕಾರಿನ ಮೇಲೆ ಕಾಡುಕೋಣ ಏಕಾಏಕಿ ಹಾರಿದ ಪರಿಣಾಮ ಕಾರು ಸಂಪೂರ್ಣ ಜಖಂ ಆಗಿರುವ ಘಟನೆ ಭಾನುವಾರ ಸಂಜೆ ನಡೆದಿದ್ದು ಸೋಮವಾರ ಬೆಳಿಗ್ಗೆ 9 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಕಾರಿನಲ್ಲಿದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಇನ್ನು ಇತ್ತೀಚಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ರಸ್ತೆಯಲ್ಲಿ ಪ್ರಾಣಿಗಳ ಸಾವು ಹಾಗೂ ವಾಹನ ಅಪಘಾತಗಳು ಹೇರಳವಾದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಗೆ ಕಾಡುಪ್ರಾಣಿಗಳ ಸಂಚಾರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.