ಅಣ್ಣಿಗೇರಿ: ಅಣ್ಣಿಗೇರಿ ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಎನ್.ಎಚ್.ಕೋನರಡ್ಡಿ ಭೇಟಿ; ತುರ್ತು ಪರಿಹಾರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ
ಹುಬ್ಬಳ್ಳಿ :ನಿನ್ನೆ ರಾತ್ರಿ ಅಣ್ಣಿಗೇರಿ ಹಾಗೂ ಪಟ್ಟಣದ ಸುತ್ತಮುತ್ತ ಸುರಿದ ನಿರಂತರ ಮಳೆಗೆ ಅಣ್ಣಿಗೇರಿ ಪಟ್ಟಣದ ವಿವಿದ ಬಡಾವಣೆಗಳಿಗೆ ಮಳೆನೀರು ಹರಿದು ಬಂದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು. ಸುದ್ದಿ ತಿಳಿದ ಶಾಸಕ ಎನ್.ಎಚ್. ಕೋನರಡ್ಡಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು, ಬೆಳಿಗ್ಗೆ ಅಣ್ಣಿಗೇರಿ ಪಟ್ಟಣಕ್ಕೆ ಆಗಮಿಸಿ, ಜನರ ನೆರವಿಗೆ ದಾವಿಸಿದರು. ಜಲಾವೃತ್ತವಾಗಿದ್ದ ಸುರಕೋಡ್ ಬಡಾವಣೆ, ರಾಜರಾಜೇಶ್ವರಿ ಬಡಾವಣೆ ಮತ್ತು ಜೆ.ಎಸ್.ಎಸ್.ಕಾಲೋನಿಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸಾರ್ವಜನಿಕರ ಅಹವಾಲು ಆಲಿಸಿದರು. ಬಡಾವಣೆಗಳಿಂದ ನೀರು ಹೊರಹಾಕಲು ತಕ್ಷಣ ಕ್ರಮವಹಿಸುವಂತೆ ನಿರ್ದೇಶಿಸಿದರು.  ಜೆಸಿಬಿ ಬಳಸಿಕೊಂಡು ನೀರು ಹರಿಯಲು ದಾರಿ, ಮೊಟರ್ ಪಂಪ್ ಬಳಸಿ ನೀರು ಬಡಾವಣೆಯಿಂದ ಹೊರಹಾಕಲು ಶಾಸಕರು ಸೂಚಿಸಿ