ಮಧುಗಿರಿ: ಬಂಡೆಯ ಸಂಧಿಯಲ್ಲಿ ಪತ್ತೆಯಾದ ಪುರುಷನ ಮೃತ ದೇಹ ಮಿಡಿಗೇಶಿಯಲ್ಲಿ ಘಟನೆ
ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಮಾರುತಿ ನಗರದ ಮಾರಮ್ಮ ದೇವಿಯ ಬಂಡೆಯ ಬಳಿ ಭಾನುವಾರ ಸಂಜೆ 5 ಗಂಟೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತಪಟ್ಟು ಎರಡು-ಮೂರು ದಿನಗಳಾಗಿದ್ದು, ದೇಹ ದುರ್ವಾಸನೆ ಬೀರುತ್ತಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿ ಸಿಮೆಂಟ್ ಬಣ್ಣದ ನಿಕ್ಕರ್ ಮತ್ತು ಬಿಳಿ ಬನಿಯನ್ ಧರಿಸಿದ್ದರು. ಪೊಲೀಸರು ತನಿಖೆ ಆರಂಭಿಸಿದ್ದು, ಮೃತನ ವಾರಸುದಾರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.