ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ 52 ರಲ್ಲಿ ವಾಸವಿ ನಗರದಿಂದ ಮಯೂರ ಗಾರ್ಡನ್ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಒಳಚರಂಡಿ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆಯನ್ನು ಶಾಸಕರಾದ ಮಹೇಶ್ ಟೆಂಗಿನಕಾಯಿ ಅವರು ನೆರವೇರಿಸಿದರು. . ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಚೇತನ ಹಿರೇಕೆರೂರ,ಪ್ರಮುಖರಾದ ಹರೀಶ ಜಂಗ್ಲಿ, ಕಿಶನ್ ಬಿಲಾನಾ, ಶಿವಾನಂದ ಕಂಪ್ಲಿ,ಶ್ರೀಮತಿ ಗೀತಾ ಮುದ್ದಿ, ಸಂತೋಷ ಕುಂದನಹಳ್ಳಿ, ಮಂಜುನಾಥ ಮೇತ್ರಾಣಿ,ಶ್ರೀಮತಿ ಸುನಿತಾ ದಲಭಂಜನ ಹಾಗೂ ಇತರರು ಉಪಸ್ಥಿತರಿದ್ದರು.