ಯಲ್ಲಾಪುರ: ಗ್ರಾಮದೇವಿ ದೇವಸ್ಥಾನದಲ್ಲಿ ಸೆ 22 ರಿಂದ ಶರನ್ನವರಾತ್ರಿ ಉತ್ಸವ
ಯಲ್ಲಾಪುರ ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಶರನ್ನವರಾತ್ರಿ ಉತ್ಸವ ಸೆ.22ರಿಂದ ಅ.2ರವರೆಗೆ ಪ್ರತಿನಿತ್ಯವೂ ವಿಶೇಷ ಪೂಜೆ, ವಿಧಿ-ವಿಧಾನಗಳು ನಡೆಯಲಿದ್ದು ಎಂದು ಟ್ರಸ್ಟಿ ರಾಜೇಂದ್ರಪ್ರಸಾದ ಭಟ್ಟ ತಿಳಿಸಿದ್ದಾರೆ. ಬೆಳಿಗ್ಗೆ 8.30ರಿಂದ ರಾತ್ರಿ 8.30 ರವರೆಗೆ ಉಡಿ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ರಾತ್ರಿ 8 ಗಂಟೆಯಿAದ ಶಿರಸಿಯ ನಾರಾಯಣ ದಾಸರಿಂದ ಹರಿಕಥಾ ಕಾಲಕ್ಷೇಪ ನಡೆಯಲಿದೆ ಎಂದು ದೇವಸ್ಥಾನ ದ ಪ್ರಧಾನ ಟ್ರಸ್ಟಿ ರಾಜೇಂದ್ರಪ್ರಸಾದ ಭಟ್ಟ ತಿಳಿಸಿದ್ದಾರೆ.