ಬಾಗೇಪಲ್ಲಿ: ಪಟ್ಟಣದಲ್ಲಿ ಕಡ್ಡಾಯ ಕನ್ನಡ ನಾಮಫಲಕಗಳ ಪ್ರದರ್ಶನಕ್ಕೆ ಆಗ್ರಹಿಸಿ ಕರವೇ ವತಿಯಿಂದ ಪ್ರತಿಭಟನೆ,ಮನವಿ ಸಲ್ಲಿಕೆ
ಕರ್ನಾಟಕ ರಕ್ಷಣಾ ವೇದಿಕೆ ಬಾಗೇಪಲ್ಲಿ ತಾಲ್ಲೂಕು ಘಟಕದ ವತಿಯಿಂದ ಇಂದು ತಾಲ್ಲೂಕಿನಾದ್ಯಂತ ಅಂಗಡಿ ಮುಗ್ಗಟ್ಟುಗಳ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಬರೆಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.ನಂತರ ತಹಸೀಲ್ದಾರ್ ಮನೀಷ್ ಎನ್ ಪತ್ರಿ ಹಾಗೂ ಪುರಸಭೆಯ ಮುಖ್ಯಾಧಿಕಾರಿ ಶ್ರೀನಿವಾಸ್ ರವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಈ ವೇಳೆ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್ ಹರೀಶ್,ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಜಾತಮ್ಮ , ಜಿಲ್ಲಾ ಉಪಾಧ್ಯಕ್ಷ ರಾಮರೆಡ್ಡಿ,ತಾಲ್ಲೂಕು ಉಪಾಧ್ಯಕ್ಷ ಚಿನ್ನು , ಕಾರ್ಯದರ್ಶಿ ಮಂಜುನಾಥ್ ,ಸಂಘಟನಾ ಕಾರ್ಯದರ್ಶಿ ಶಂಕರ್ ಕಾರ್ಮಿಕ ಘಟಕದ ಕೃಷ್ಣಪ್ಪ , ವೆಂಕಟೇಶ್ , ತಾಲ್ಲೂಕು ಖಜಾಂಚಿ ನಾರಾಯಣ ಸ್ವಾಮಿ ,ವಿದ್ಯಾರ್ಥಿ ಘಟಕದ ಗಂಗರಾಜು ,ಮೂರ್ತಿ,ರಾಜು ಇತರರು ಇದ್ದರು.