ಶಿರಸಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ನರಸಿಂಹ ಅಡಿ,ಉಪಾಧ್ಯಕ್ಷರಾಗಿ ಮಾರುತಿ, ಬಸವರಾಜ್,ಸುಮಂಗಳಾ ಆಯ್ಕೆ
ಶಿರಸಿ : ನಡೆದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉತ್ತರಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನರಸಿಂಹ ಅಡಿ ಆಯ್ಕೆಯಾಗಿದ್ದಾರೆ. ನರಸಿಂಹ ಅಡಿ ಅವರಿಗೆ 59 ಮತಗಳು ಮತ್ತು ಪ್ರತಿಸ್ಪರ್ಧಿ ಪ್ರದೀಪ ಶೆಟ್ಟಿ ಅವರಿಗೆ 50 ಮತಗಳು ಬಿದ್ದಿವೆ. ಮೂರು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಸವರಾಜ ಪಾಟೀಲ್, ಮಾರುತಿ ನಾಯ್ಕ ಮತ್ತು ಸುಮಂಗಲಾ ಹೊನ್ನೆಕೊಪ್ಪ ಆಯ್ಕೆಯಾಗಿದ್ದಾರೆ. ಬಸವರಾಜ ಪಾಟೀಲರಿಗೆ 78 ಮತಗಳು, ಮಾರುತಿ ನಾಯ್ಕ ಅವರಿಗೆ 92 ಮತಗಳು ಮತ್ತು ಸುಮಂಗಲಾ ಹೊನ್ನೆಕೊಪ್ಪ ಅವರಿಗೆ 63 ಮತಗಳು ಬಿದ್ದಿವೆ. ಚಲಾವಣೆಗೊಂಡಿದ್ದ 112 ಮತಗಳ ಪೈಕಿ ಗುರು ಅಡಿಗೆ 59 ಹಾಗ