ಹುಬ್ಬಳ್ಳಿ - ಹುಬ್ಬಳ್ಳಿ ಉಪ ಕಾರಾಗೃಹ ಮೇಲೆ ಹುಧಾ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಡಿಸಿಪಿಗಳಾದ ಮಹಾನಿಂಗ್ ನಂದಗಾವಿ, ರವೀಶ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಯಿಂದ ಏಕಕಾಲದಲ್ಲಿ ದಾಳಿ ಮಾಡಲಾಯಿತು. ಜೈಲಿನ ಪ್ರತಿಯೊಂದು ಬ್ಯಾರಕ್ ನಲ್ಲಿ ತಪಾಸಣೆ ಮಾಡಿ ಜೈಲೊಳಗೆ ಮೊಬೈಲ್, ಡ್ರಗ್ಸ್ ಸಿಗ್ತಿದೆಯಾ ಅನ್ನೋ ಬಗ್ಗೆ ತಪಾಸಣೆ ಕೈಗೊಳ್ಳಲಾಯಿತು.