ಆನೇಕಲ್: ಕಾಲಿಲ್ಲದ ಕರಡಿಗೆ ಕೃತಕ ಕಾಲು ಜೋಡಣೆ! ವಾರೆವ್ಹಾ ಆರ್ಟಿಫಿಷಿಯಲ್ ಕಾಲು ಹಾಕಿದ ಮೇಲೆ ಬನ್ನೇರುಘಟ್ಟದಲ್ಲೇ ಈ ಕರಡಿ ದೇ ಹವಾ
ಸಪ್ಟಂಬರ್ 18 ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕರಡಿ ಗೆ ಕೃತಕ ಕಾಲು ಜೋಡಣೆ ಮಾಡಿ ಶಸ್ತ್ರ ಚಿಕಿತ್ಸೆ ಈಗ ಯಶಸ್ವಿಯಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ ಆವರಣದಲ್ಲಿ ಇರುವಂತಹ ಕರಡಿ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡಿತಾ ಇದ್ದ ಕರಡಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಸದ್ಯ ಯಶಸ್ಸು ಕಂಡಿದ್ದು ಕರಡಿ ಲವಲವಿಕೆಯಿಂದ ಓಡಾಟ ನಡೆಸುತ್ತಿದೆ ಮೊದಲು ಬೇಟೆಗಾರರ ಬಲೆಗೆ ಸಿಲುಕಿ ಕರಡಿ ಕಾಲನ್ನು ಕಳೆದುಕೊಂಡಿದ್ದು ಮಂಕಾಗಿ ಕುಳಿತುಕೊಳ್ಳುತ್ತಿತ್ತು ಈ ಹಿನ್ನೆಲೆ ಈಗ ಸರ್ಜರಿ ಮಾಡಿದ ಮೇಲೆ ಕರಡಿ ಎಂದಿನಂತೆ ಓಡಾಟವನ್ನು ನಡೆಸುತ್ತಿದೆ