ಹೊಸನಗರ: ಮಳಲಿಮಠ ಗುರುನಾಗಭೂಷಣ ಶ್ರೀಗಳ ಆಶೀರ್ವಾದ ಪಡೆದ ಹರತಾಳು ಹಾಲಪ್ಪ
ಹೊಸನಗರ ತಾಲೂಕಿನ ಮಳಲಿಮಠದ ಶ್ರೀ ನಾಗಾರ್ಜುನಸ್ವಾಮಿ ಮತ್ತು ಶ್ರೀ ರೇಣುಕಾ ಮಂದಿರಕ್ಕೆ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಭೇಟಿ ನೀಡಿ ಭಾನುವಾರ ಸಂಜೆ 5 ಗಂಟೆಗೆ ವಿಶೇಷ ಪೂಜೆ ಸಲ್ಲಿಸಿದರು ನಂತರ ಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆಯುವ ಮೂಲಕ ಗುರುಗಳನ್ನು ಗೌರವಿಸಿದರು. ಕೆಲಸಮಯ ಸ್ವಾಮೀಜಿಯವರೊಂದಿಗೆ ರಾಜಕೀಯದ ಕುರಿತು ಚರ್ಚಿಸಿ ಮಠದ ಅಭಿವೃದ್ದಿ ಕಾರ್ಯಗಳ ಬಗ್ಗೆ ಹಾಗೂ ನವೆಂಬರ್ 4 ರಂದು ನಡೆಯುವ ಕಾರ್ತಿಕ ದೀಪೋತ್ಸವದ ಪೂರ್ವ ಸಿದ್ದತೆಯ ಕುರಿತು ಸಮಗ್ರ ಸಮಾಲೋಚನೆ ನಡೆಸಿದರು.