ಹುಬ್ಬಳ್ಳಿ ನಗರ: ಈರುಳ್ಳಿಗೆ ಸರ್ಕಾರ ಬೆಂಬಲ ಬೆಲೆ ನೀಡಬೇಕೆಂದು  ನಗರದಲ್ಲಿ ರೈತ ಮುಖಂಡ ಶಿವಾನಂದ್ ಕರಿಗಾರ ಹೇಳಿಕೆ
ಈರುಳ್ಳಿ ಬೆಲೆ ಕುಸಿದಿದ್ದು ಸರ್ಕಾರ ಬೆಂಬಲ ಬೆಲೆ ನೀಡಬೇಕೆಂದು ರೈತ ಮುಖಂಡ ಶಿವಾನಂದ್ ಕರಿಗಾರ್ ಆಗ್ರಹಿಸಿದ್ದಾರೆ. ನಗರದಲ್ಲಿ ಮಾತನಾಡಿದವರು ಅವರು.  ದಿಡೀರನೆ ಇರುಳಿ ಬೆಲೆ ಕುಸ್ತಿದ್ದು ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದರ ಜೊತೆಗೆ ಹೆಸರು ಬೇಳೆ ಮಳೆ ಹೆಚ್ಚಾಗಿ ನಾಶವಾಗಿದೆ. ಖರೀದಿ ಕೇಂದ್ರ ಪ್ರಾರಂಭ ಮಾಡುವುದಾಗಿ  ರಾಜ್ಯ ಹಾಗೂ ಕೇಂದ್ರ ಸರ್ಕಾರ  ಹೇಳಿ ಎರಡು ತಿಂಗಳಾದರೂ  ಹಣ ಬಿಡುಗಡೆ ಮಾಡಿಲ್ಲ. ಪರಿಹಾರ ನೀಡುವುದಾಗಿ ಹೇಳಿದ ಸರ್ಕಾರ  ಇದುವರೆಗೂ ಒಂದು ರೂಪಾಯಿ ಪರಿಹಾರ ಬಂದಿಲ್ಲ. ಈ ಬಾರಿ ಈರುಳ್ಳಿ ರೈತರ ಕಣ್ಣಲ್ಲಿ ನೀರು ತರಿಸಿದ್ದು. ಆದ್ದರಿಂದ ಸರ್ಕಾರ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿದರು.