ಹುಬ್ಬಳ್ಳಿ ನಗರ: ನಗರದ ಕೇಂದ್ರ ಬಸ್ ನಿಲ್ದಾಣದಿಂದ ಚಿಗರಿ ಬಸ್ ಗಳ ಓಡಿಸುವ ಚಿಂತನೆ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಧಾರವಾಡ ನಡುವೆ ತ್ವರಿತ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ಬಿ ಆರ್ ಟಿಎಸ್ (ಚಿಗರಿ ಬಸ್) ಸೇವೆ ಆರಂಭಿಸಲಾಗಿದೆ. ಈ ಸೇವೆ ಈಗ ವಿಸ್ತರಣೆಯಾಗಲಿದೆ. ಗೋಕುಲ್ ರೋಡ್ ನ ಕೇಂದ್ರ ಬಸ್ ನಿಲ್ದಾಣದಿಂದ ಧಾರವಾಡಕ್ಕೆ ನೇರವಾಗಿ ಬಿ ಆರ್ ಟಿಎಸ್ ಬಸ್ ಸೇವೆ ಒದಗಿಸಲು ವಾಯುವ್ಯ ಸಾರಿಗೆ ಸಂಸ್ಥೆ ಚಿಂತನೆ ನಡೆಸಿದೆ. ಈಗಾಗಲೇ ಕಾರ್ಯಾಚರಣೆಯಲ್ಲಿರುವ ಬಿಆರ್‌ಟಿಎಸ್ ಬಸ್‌ಗಳು ಸಿಬಿಟಿ, ರೈಲ್ವೆ ನಿಲ್ದಾಣದಿಂದ ಧಾರವಾಡ ಹೊಸ ಬಸ್ ನಿಲ್ದಾಣಕ್ಕೆ ಸಂಚರಿಸುತ್ತಿವೆ. ಹುಬ್ಬಳ್ಳಿ ಕೇಂದ್ರ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಚಿಗರಿ ಸೇವೆ ಪಡೆಯಬೇಕೆಂದರೆ, ಮತ್ತೊಂದು ಬಸ್ ಹತ್ತಿ ಹೊಸೂರು ಇಲ್ಲವೇ ಹಳೇ ಬಸ್ ನಿಲ್ದಾಣಕ್ಕೆ ಬರಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಪ್ರಯಾಣಿಕರ ಈ