ಬಳ್ಳಾರಿ: ಭತ್ತ ಹಾಗೂ ಮೆಕ್ಕೆಜೋಳ ಬೆಳೆಗಳಿಗೆ ಬೆಂಬಲ ಬೆಲೆಗೆ ಆಗ್ರಹಿಸಿ;ಅ.31 ರಂದು ಬಳ್ಳಾರಿಯಲ್ಲಿ AIKKMS ರೈತ ಸಂಘಟನೆ ಪ್ರತಿಭಟನೆ
ಭತ್ತ ಹಾಗೂ ಮೆಕ್ಕೆಜೋಳ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ಇದೇ ತಿಂಗಳು 31ರಂದು ಬಳ್ಳಾರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ, ಇದರ ಅಂಗವಾಗಿ ಬುಧವಾರ ರಾತ್ರಿ 8ಗಂಟೆಗೆAIKKMS ರೈತ ಸಂಘಟನೆ ಬಳ್ಳಾರಿ ತಾಲೂಕಿನ ಎತ್ತಿನ ಬೂದಿಹಾಳ ಗ್ರಾಮದಲ್ಲಿ ಪ್ರಚಾರ ಹಮ್ಮಿಕೊಳ್ಳಲಾಗಿತ್ತು. ಸಂಘಟನೆಯ ಜಿಲ್ಲಾಧ್ಯಕ್ಷರಾದ ಗೋವಿಂದವರು ಮಾತನಾಡುತ್ತಾ ಈ ಭಾಗದ ರೈತರು ಬಹುತೇಕ ಬೆಳೆಯುವ ಬೆಳೆ ಭತ್ತವಾಗಿದೆ ಮತ್ತು ಇತ್ತೀಚಿಗೆ ಕೆಲವು ವರ್ಷಗಳಿಂದ ಮೆಣಸಿನಕಾಯಿ ಬೆಳೆಯುವ ರೈತರಿಗೆ ಸರಿಯಾದ ಬೆಲೆ ಸಿಗದೆ ಇರುವ ಕಾರಣ ಸಾಕಷ್ಟು ರೈತರು ನಷ್ಟಕ್ಕೀಡಾದರು. ಆದ್ದರಿಂದ ಮೆಣಸಿನಕಾಯಿ ಬೆಳೆ ಬೆಳೆಯುವ ರೈತರು ಈ ಬಾರಿ ತಾವು ಮೆಕ್ಕೆಜೋಳ ಬೆಳೆ ಬೆ