ಹುಬ್ಬಳ್ಳಿ: ಬಿಹಾರ ಚುನಾವಣೆ ಫಲಿತಾಂಶ ಕುರಿತು ಖರ್ಗೆ ಅವರ ನಿವಾಸದಲ್ಲಿ ಚರ್ಚೆ ಆಗಿದ್ದು ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ಚರ್ಚಿಸಿದ ವಿಚಾರ, ಕಳೆದ ಮೂರು ವರ್ಷಗಳಿಂದ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಗಮನ ಹರಿಸುತ್ತಾ ಇದೆ. ವೋಟ್ ಛೋರಿ ಬಗ್ಗೆ ಜಾಗೃತಿ ಮಾಡಿದರು ಸಹ ದುರ್ನಡತೆಯಿಂದ ನಡೆದುಕೊಳ್ಳುತ್ತಾ ಇದ್ದಾರೆ ಎಂದು ಎಚ್.ಕೆ ಪಾಟೀಲ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಅಡಿ ಕಾರ್ಯ ಮಾಡುತ್ತಾ ಇಲ್ಲ ಸತ್ಯ ಕಂಡುಹಿಡಿಯಬೇಕು, ಸತ್ಯ ಜನರಿಗೆ ತಿಳಿಸಬೇಕು ಎಂಬ ವಿಚಾರ ಚುನಾವಣಾ ಆಯೋಗಕ್ಕೆ ಇಲ್ಲ. ಚುನಾವಣಾ ಆಯೋಗ ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ಹೆಚ್ಚು ದೊಡ್ಡದಲ್ಲ. ಚುನಾವಣಾ ಆಯೋಗ ಸರ್ವಾಧಿಕಾರದಂತೆ ವರ್ತನೆ ಸರಿಯಲ್ಲ ಎಂದರು.