ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಪೊಲೀಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾನುವಾರ, ಡಿಸಿಎಂ ಮನೆಗೆ 5 ವರ್ಷದೊಳಗಿನ ಒಂದಷ್ಟು ಪುಟಾಣಿಗಳು ಪೋಷಕರ ಜೊತೆ ಆಗಮಿಸಿದ್ದರು. ಹಾಗೆ ಬಂದ ಪುಟಾಣಿಗಳಿಗೆ ಪೋಲಿಯೋ ಹನಿ ಹಾಕುವುದಷ್ಟೇ ಅಲ್ಲದೆ, ಬಿಸ್ಕೆಟ್, ಸಿಹಿ ನೀಡಿ ಖುಷಿಪಟ್ಟರು. ಇದಾದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿ, ಜಿಬಿಎ ವತಿಯಿಂದ ನಗರೆದೆಲ್ಲೆಡೆ ಪೋಲಿಯೋ ಬೂತ್ ವ್ಯವಸ್ಥೆ ಮಾಡಲಾಗಿದೆ, ಎಲ್ಲರೂ ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ ಎಂದರು.