ಶಿರಸಿ :ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆ ಫಲಿತಾಂಶ ಎ ಸಿ ಕಾವ್ಯ ರಾಣಿ ಅವರು ಅಧಿಕೃತ ಘೋಷಣೆ ಮಾಡಿದರು ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆ ಅತ್ಯಂತ ಶಾಂತಯುತವಾಗಿ ನಡೆದಿದೆ.ಕೆಡಿಸಿಸಿ ಬ್ಯಾಂಕಿನ 16 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಘೋಷಣೆ ಮಾಡಿದಂತೆ ಮೂವರು ಅವಿರೋದವಾಗಿ ಆಯ್ಕೆಯಾಗಿದ್ದರಿಂದ ಉಳಿದ 13, ಸ್ಥಾನಕ್ಕೆ ಚುನಾವಣೆಯನ್ನು ಇಂದು ಸಹಾಯಕ ಆಯುಕ್ತರು ಹಾಗು ಚುನಾವಣಾಧಿಕಾರಿ ಕು.ಕಾವ್ಯರಾಣಿ ನೇತ್ರತ್ವದಲ್ಲಿ ನಡೆಸಲಾಗಿತ್ತು.ಆದರೆ ಮತದಾನದ ಬಳಿಕ ಚುನಾವಣಾದಿಕಾರಿಗಳು ಕಾನೂನು ಬದ್ದವಾಗಿ ಮತ ಎಣಿಕೆಗೊಂಡ 4 ಕ್ಷೇತ್ರ ಹಾಗು ಅವಿರೋದವಾಗಿ ಆಯ್ಕೆಯಾಗಿರುವ 3 ಕ್ಷೇತ್ರ ಸೇರಿ ಒಟ್ಟೂ 7 ಕ್ಷೇತ್ರಗಳ ಫಲಿತಾಂಶವನ್ನು ಅದಿಕೃತವಾಗಿ ಘೋಷಿಸಿದರು