ಸಾಗರ: ಡಿ.17ರಂದು ಸಾಗರ ಬಂದ್ ಗೆ ಕರೆ: ಸಾಗರದಲ್ಲಿ ಸಮಿತಿಯ ಮುಖ್ಯಸ್ಥ ತೀ.ನಾ. ಶ್ರೀನಿವಾಸ್
Sagar, Shimoga | Dec 13, 2025 ಸಾಗರ ಜಿಲ್ಲಾ ಕೇಂದ್ರ ಮಾಡಬೇಕು ಎಂದು ಒತ್ತಾಯಿಸಿ ಡಿಸೆಂಬರ್ 17ರಂದು ಸಾಗರ ಬಂದ್ ಮಾಡಲಾಗುತ್ತಿದೆ ಇದಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ ಎಂದು ಸಾಗರ ಜಿಲ್ಲಾ ಹೋರಾಟ ಸಮಿತಿಯ ಮುಖಂಡ ತೀ.ನಾ. ಶ್ರೀನಿವಾಸ್ ತಿಳಿಸಿದ್ದಾರೆ.ಶನಿವಾರ ಸಾಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಗರವನ್ನು ಜಿಲ್ಲೆ ಮಾಡಬೇಕು ಎಂಬ ಒತ್ತಾಯವಿದೆ ಆದರೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಸರ್ಕಾರದ ಮೇಲೆ ಒತ್ತಡ ಹೇರಲು ಬಂದ್ ಮಾಡಲಾಗುತ್ತಿದೆ ಇದಕ್ಕೆ ವಿವಿಧ ಸಂಘಟನೆಗಳು, ಬೆಂಬಲ ಸೂಚಿಸಿವೆ ಎಂದರು.