ಶಿವಮೊಗ್ಗ: ವ್ಯಕ್ತಿಗೆ ಬ್ಯಾಡ್ಮಿಂಟನ್ ಅಕಾಡೆಮಿ ಹೆಸರಲ್ಲಿ 4 ಲಕ್ಷ ವಂಚನೆ, ಶಿವಮೊಗ್ಗದ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲು
ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಪಾಲುದಾರಿಕೆ ನೀಡುವುದಾಗಿ ನಂಬಿಸಿ, ದುಬೈನಲ್ಲಿ ನೆಲೆಸಿದ್ದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 4 ಲಕ್ಷ ವಂಚಿಸಿರುವ ಬಗ್ಗೆ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ದೂರು ದಾಖಲಾಗಿದೆ. ದುಬೈನಲ್ಲಿ ನೆಲೆಸಿದ್ದ ದೂರುದಾರರಿಗೆ ಒಬ್ಬ ಅಪರಿಚಿತ ವ್ಯಕ್ತಿ ಫೇಸ್ಬುಕ್ ಮೂಲಕ ಸಂದೇಶ ಕಳುಹಿಸಿದ್ದ. ತಾನು ಇಎಸ್ ಸ್ಪೋರ್ಟ್ಸ್ ಎಂಬ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ನಡೆಸುತ್ತಿದ್ದು, ಅದರಲ್ಲಿ ಶೇರುಗಳನ್ನು ಖರೀದಿಸಿ ಪಾಲುದಾರರಾಗುವಂತೆ ಆಹ್ವಾನಿಸಿದ್ದ.ಇದನ್ನು ನಂಬಿದ ದೂರುದಾರರು, ಶಿವಮೊಗ್ಗದಲ್ಲಿರುವ ತಮ್ಮ ಮಾವನ ಮನೆಗೆ ಅಪರಿಚಿತ ವ್ಯಕ್ತಿ ಬಂದಾಗ ನಗದು ರೂಪದಲ್ಲಿ 1 ಲಕ್ಷ ನೀಡಿದ್ದಾರೆ.