ಹೊನ್ನಾವರ: ತಾಲೂಕಿನ ಹಳದೀಪುರದ ವ್ಯಕ್ತಿ ರೈಲ್ವೆಗೆ ತಲೆಕೊಟ್ಟು ಆತ್ಮಹತ್ಯೆ
ಹೊನ್ನಾವರ: ತಾಲೂಕಿನ ಹಳದೀಪುರ ಕಲ್ಕಟ್ಟೆ ಬಳಿ ರೈಲ್ವೆಗೆ ತಲೆಕೊಟ್ಟು ವ್ಯಕ್ತಿ ಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.. ಮೃತ ವ್ಯಕ್ತಿ ಹಳದೀಪುರ ಸಾಲಿಕೇರಿಯ ಗುಂದಾ ನಿವಾಸಿ ಹನುಮಂತ ತಿಮ್ಮು ಗೌಡ (42) ಎಂದು ಗುರುತಿಸಲಾಗಿದೆ. ಈತನು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ. .ಇದೆ ಕಾರಣಕ್ಕೆ ಇಂದು ಸೋಮವಾರ ಬೆಳಗ್ಗೆ ಮಂಗಳೂರಿನಿಂದ ಮಡಗಾವ್ ಕಡೆಗೆ ತೆರಳುತ್ತಿದ್ದ ಗೂಡ್ಸ್ ಟ್ರೈನ್‌ಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಘಟನೆ ಕುರಿತು ಮೃತನ ಅಣ್ಣ ಮಾದೇವ ತಿಮ್ಮು ಗೌಡ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.