ಬೆಂಗಳೂರು ಪೂರ್ವ: ಹೆಂಡತಿಯರೇ ಹುಷಾರ್! ಇದೊಂದು ಕಾರಣಕ್ಕೆ ಹೆಂಡತಿ ಕೊಂದ ಪಾಪಿ ಪತಿ! ಮಾರತ್ ಹಳ್ಳಿಯ ಮೃಗನ ಕಥೆ!
ಮಾರತ್ ಹಳ್ಳಿಯಲ್ಲಿ ಕೃತಿಕಾ ರೆಡ್ಡಿಯನ್ನ ಪತಿಯಿಂದಲೇ ಕೊಂದ ಪ್ರಕರಣ ಸಂಬಂಧ ಮತ್ತಷ್ಟು ಮಾಹಿತಿ ಲಭ್ಯವಾಗಿದೆ. ಅಕ್ಟೋಬರ್ 16 ಸಂಜೆ 4 ಗಂಟೆಗೆ ಲಭ್ಯ ಆದ ಮಾಹಿತಿ ಪ್ರಕಾರ ಮಹೇಂದ್ರ ರೆಡ್ಡಿಗೆ ಅನೈತಿಕ ಸಂಬಂಧ ಇತ್ತಂತೆ. ಇದೇ ಕಾರಣಕ್ಕೆ ಇನ್ನೊಂದು ಮೊಬೈಲ್ ಬಳಕೆ ಮಾಡ್ತಾ ಇದ್ನಂತೆ. ಕ್ರತಿಕಾಗೆ ಇದ್ದ ವಾಂತಿ ಅಜೀರ್ಣ ಸಮಸ್ಯೆ ಮಹೇಂದ್ರ ರೆಡ್ಡಿಗೆ ಕಿರಿ ಕಿರಿ ಆಗ್ತಾ ಇತ್ತು. ತನ್ನ ರೂಟ್ ಕ್ಲಿಯರ್ ಮಾಡಲು ಅನೈತಿಕ ಸಂಬಂಧ ಇಟ್ಟು ಕೊಂಡಿದ್ದ ಮಹಿಳೆ ಜೊತೆ ಸೇರಿ ಈ ಕೆಲಸ ಮಾಡಿರುವ ಶಂಕೆ ಇದೆ. ಸದ್ಯ ಪೊಲೀಸರು ಮಹೇಂದ್ರ ಮೊಬೈಲ್ & ಕೃತಿಕಾ ಬಳಕೆ ಮಾಡ್ತಾ ಇದ್ದ ಮೊಬೈಲ್ ತಗೊಂಡು ತನಿಖೆ ಚುರುಕು ಗೊಳಿಸಿದ್ದಾರೆ