ಕಲಬುರಗಿ: ನಗರದಲ್ಲಿ ₹38.74 ಲಕ್ಷ ಮೌಲ್ಯದ ಮಾದಕ ವಸ್ತುಗಳು ನಾಶ
ಕಲಬುರಗಿ ನಗರದ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ 15 ಪ್ರಕರಣಗಳಿಂದ ವಶಪಡಿಸಿಕೊಂಡ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ನಾಶಗೊಳಿಸಲಾಯಿತು. ₹11,63,000 ಮೌಲ್ಯದ 19 ಕೆಜಿ ಗಾಂಜಾ ₹27,11,000 ಮೌಲ್ಯದ 778 ಕೆಜಿ ಸಿಂಥೆಟಿಕ್ ಡ್ರಗ್ಸ್, ಟ್ಯಾಬ್ಲೆಟ್ಸ್/ಸಿರಪ್ ಸೇರಿ ಒಟ್ಟಾರೆ ₹38.74 ಮೌಲ್ಯದ ಮಾದಕ ವಸ್ತುಗಳನ್ನು ಪರಿಸರ ಅಧಿಕಾರಿಗಳು ಮತ್ತು ಕಲಬುರಗಿ ಜಿಲ್ಲಾ ಮಾದಕ ವಸ್ತು ವಿಲೇವಾರಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ಸಮ್ಮುಖದಲ್ಲಿ ನಾಶಗೊಳಿಸಲಾಯಿತು.