ವಿದ್ಯಾರ್ಥಿಗಳು ಸೇರಿ 6 ಮಂದಿಗೆ ಬೀದಿನಾಯಿ ಕಚ್ಚಿದ್ದು ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ. ಯಳಂದೂರು ತಾಲೂಕಿನ ಯರಗಂಬಳ್ಳಿ ಗ್ರಾಮದ ಸಿದ್ದು (14), ಗಣಿಗನೂರು ಗ್ರಾಮದ ವೃಷಿಕ (6), ಹರಿಹರ ಕುಮಾರ್(12), ಮದ್ದೂರು ಗ್ರಾಮದ ಮಹದೇವಮ್ಮ (45), ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದ ನಿಷಿಕ (6),ಅಂಬಳೆ ರವಿ (35) ಈ ಆರು ಮಂದಿಗೆ ನಾಯಿ ಕಚ್ಚಿದ್ದು ಯಳಂದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪಟ್ಟಣದಲ್ಲಿ ಪದೇಪದೇ ನಾಯಿ ಜನರಿಗೆ ಕಚ್ಚುತ್ತಿರುವುದರಿಂದ ಆತಂಕ ಪರಿಸ್ಥಿತಿ ನಿರ್ಮಾಣವಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿ ವರ್ಗ ನಾಯಿಗಳನ್ನು ಸೆರೆ ಹಿಡಿಯಲು ಸಾರ್ವಜನಿಕರು ಆಗ್ರಹಿಸಿದ್ದಾರೆ.