ಬೆಂಗಳೂರು ಪೂರ್ವ: ಚಿಪ್ಸ್ ಖರೀದಿ ವಿಚಾರಕ್ಕೆ ಬೇಕರಿ ಸಿಬ್ಬಂದಿ ಹಾಗೂ ಯುವಕನ ಬಡಿದಾಟ, ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ ಘಟನೆ
ಚಿಪ್ಸ್ ಖರೀದಿ ವಿಚಾರಕ್ಕೆ ಬೇಕರಿ ಸಿಬ್ಬಂದಿ ಹಾಗೂ ಯುವಕ ಬಡಿದಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೆಪ್ಟೆಂಬರ್ 14ರಂದು ರಾತ್ರಿ 10:20ರ ಸುಮಾರಿಗೆ ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಬಡಿದಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ರಾತ್ರಿ ಬೇಕರಿಗೆ ಬಂದಿದ್ದ ಯುವಕರ ಪೈಕಿ ಓರ್ವ ಚಿಪ್ಸ್ ಕೇಳಿದ್ದ. ಕೊಡಲು ಲೇಟ್ ಆಯ್ತು ಎಂದು ಸುಮಾರು 2 ನಿಮಿಷ ಬೇಕರಿಯವರೊಂದಿಗೆ ವಾಗ್ವಾದ ನಡೆಸಿದ್ದಾನೆ. ಮಾತಿಗೆ ಮಾತು ಬೆಳೆದಾಗ ಏಕಾಏಕಿ ಬೇಕರಿಯವರ ಮೇಲೆ ಹಲ್ಲೆಗೈದಿದ್ದಾನೆ.ಘಟನೆ ಬಳಿಕ ಬೇಕರಿ ಸಿಬ್ಬಂದಿ ಕೂಡಾ ಯುವಕನ ಮೇಲೆ ಹಲ್ಲೆಗೈದಿದ್ದಾರೆ. ಬಳಿಕ ಕೊಡಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು,ಆರೋಪಿ ಯುವಕನನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.