ಮದ್ದೂರು: ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತಿಯ ಮಹೋತ್ಸವದ ಪ್ರಚಾರದ ರಥ ಭಾರತೀನಗದಲ್ಲಿ ಆಗಮನ, ಸ್ವಾಗತ
Maddur, Mandya | Dec 12, 2025 ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತಿಯ ಮಹೋತ್ಸವದ ಅಂಗವಾಗಿ ಪ್ರಚಾರದ ರಥ ಮದ್ದೂರು ತಾಲ್ಲೂಕು ಭಾರತೀನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ವೀರಶೈವ ಸಮುದಾಯ ಮತ್ತು ಗ್ರಾ.ಪಂ ವತಿಯಿಂದ ಸ್ವಾಗತಿಸಲಾಯಿತು. ನಂತರ ವೀರಶೈವ ಸಮುದಾಯ ಭವನದ ಬಳಿ ಇರುವ ಗಣಪತಿ ದೇವಾಲಯದಲ್ಲಿ ರಥಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ನಡೆಸಲಾಯಿತು. ಈ ಸಂದರ್ಭದಲ್ಲಿ ಪೂರಿಗಾಲಿ ಶ್ರೀಚನ್ನಬಸವ ಒಡೆಯರ ಮಠದ ಶ್ರೀಶಿವಾನಂದ ಶಿವಾಚಾರ್ಯ ಸ್ವಾಮಿಗಳು ಪ್ರಚಾರಕ್ಕೆ ಕರೆ ನೀಡುವ ಮೂಲಕ ಮಾತನಾಡಿ, ಮಳವಳ್ಳಿಯಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತಿ ಮಹೋತ್ಸವ ಡಿ.15 ರಿಂದ 22 ರವರೆಗೆ ನಡೆಯುವುದರಿಂದ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ದಾಸೋಹ,