ಶಿವಮೊಗ್ಗ: ನಗರದಲ್ಲಿ ಮುಟ್ಟಿನ ನೈರ್ಮಲ್ಯ ದಿನಾಚರಣೆ
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಚಂದನ ಸಭಾಂಗಣದಲ್ಲಿ ಮುಟ್ಟಿನ ನೈರ್ಮಲ್ಯ ದಿನ ಆಚರಿಸಲಾಯಿತು. ಕಾರ್ಯಕ್ರಮವನ್ನು ಡಾ ಮೈಥಿಲಿ ಪೂರ್ಣಾನಂದ ಬಿ.ಎಮ್.ಎಸ್. ಎಮ್.ಡಿ ಭಾರತಿ ಚಿಕಿತ್ಸಾಲಯ ವಿನೋಬನಗರ ಶಿವಮೊಗ್ಗ ಇವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದ್ದರು ಕಾರ್ಯಕ್ರಮದಲ್ಲಿ ಕುವೆಂಪು ವಿವಿಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭ ಮರವಂತೆ, ಗಂಗೋತ್ರಿ ನರ್ಸಿಂಗ್ ಹೋಂನ ಮುಖ್ಯಸ್ಥೆ ಶ್ರೀಮತಿ ಉಷಾ ಉತ್ತಪ್ಪ, ಪ್ರೊ.ಮಮತ ಪಿ.ಆರ್ ಆರ್ಚಾಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಶಿವಮೊಗ್ಗ, ಪ್ರೊ ಕೆ.ಎಮ್ ನಾಗರಾಜು ಎನ್.ಎಸ್.ಎಸ್. ವಿಭಾಗದ ಸಂಚಾಲಕ, ಪ್ರೊ ಎಸ್ ಜಗದೀಶ್ ಮುಖ್ಯಸ್ಥರು ವಾಣಿಜ್ಯ ವಿಭಾಗ, ಪ್ರೊ ಮಂಜುನಾಥ್ ಎನ್ ಹಾಗೂ ಇನ್ನಿತರ ಪ್ರಮುಖರು ಇದ್ದರು.