ಆಲೂರು: ಹಳೆಆಲೂರಿನಲ್ಲಿ ನಿಗೂಢ ಸ್ಫೋಟಗೊಂಡ ಮನೆಗೆ ಸಂಸದ ಶ್ರೇಯಸ್ ಪಟೇಲ್ ಭೇಟಿ, : ಪರಿಶೀಲನೆ
Alur, Hassan | Sep 30, 2025 ಹಾಸನ: ಆಲೂರು ತಾಲ್ಲೂಕಿನ ಬಿಕ್ಕೋಡು ರಸ್ತೆಯ ಹಳೇ ಆಲೂರು ಗ್ರಾಮದಲ್ಲಿ ನಿಗೂಢ ಸ್ಫೋಟ ವಾಗಿರುವ ಸ್ಥಳಕ್ಕೆ ಸಂಸದ ಶ್ರೇಯಸ್ ಪಟೇಲ್ ಇಂದು ಸಂಜೆ ಭೇಟಿ ನೀಡಿ ಪರಿಶೀಲಿಸಿದರು.ಮನೆಯ ನಿವಾಸಿಗಳಾದಸುದರ್ಶನ್ ಆಚಾರ್ (32) ಹಾಗೂ ಪತ್ನಿ ಕಾವ್ಯ (27) ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹಾಸನ ಜಿಲ್ಲಾಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಈ ವೇಳೆ ಮಾತನಾಡಿದ ಸಂಸದರು ಘಟನೆಗೆ ನಿಜ ಕಾರಣ ಏನೆಂಬುದರ ಬಗ್ಗೆ ತನಿಖೆ ಆರಂಭ ಆಗಿದೆ. ವರದಿ ಪರಿಶೀಲಿಸಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಆಶಿಸಿದರು