ಹುಬ್ಬಳ್ಳಿ ನಗರ: ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಚಾಕು ಇರಿತ:ನಾಲ್ವರ ಬಂಧನ
ಹುಬ್ಬಳ್ಳಿ: ವ್ಯಕ್ತಿಯೊಬ್ಬರಿಗೆ ಚಾಕು ಇರಿದಿದ್ದ ನಾಲ್ವರನ್ನು ಇಲ್ಲಿಯ ಬೆಂಡಿಗೇರಿ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ತೋಯಿದ್ ಮಿರ್ಜಿ, ಜೈಯಿದ್ ಕೋಳೂರ, ಮಹ್ಮದ್‌ಫಾರುಕ್ ಶೇಖ್, ಸಮೀರ ಹವಾಲ್ದಾರ ಬಂಧಿತರು. ಆಶ್ರಫ್ ಬಾಗಲಕೋಟೆ ಹಾಗೂ ಮಹ್ಮದ್ ಅಲ್ತಾಫ್ ಯಲಿಗಾರ ಅವರ ಮೇಲೆ ಹಳೆಯ ವೈಷಮ್ಯ ಇಟ್ಟುಕೊಂಡಿದ್ದ ಬಂಧಿತರು, ಇಬ್ಬರನ್ನೂ ಇಲ್ಲಿಯ ಎಂ.ಡಿ. ಕಾಲನಿಯ ಗುಡ್ಡು ಪಾನ್‌ಶಾಪ್ ಹತ್ತಿರ ಕರೆಯಿಸಿಕೊಂಡಿದ್ದರು. ಅವಾಚ್ಯವಾಗಿ ನಿಂದಿಸಿದ್ದಲ್ಲದೆ ತೋಯಿದ್, ಚಾಕುವಿನಿಂದ ಮಹ್ಮದ್ ಅಲ್ತಾಫ್ ಯಲಿಗಾರ ಹೊಟ್ಟೆ ಇತರೆಡೆ ಚುಚ್ಚಿದ್ದಾನೆ. ಗಾಯಗೊಂಡಿರುವ ಯಲಿಗಾರ, ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.