ಹುಬ್ಬಳ್ಳಿ: ಸೈನಿಕರಿಂತೆ ಆರ್ ಎಸ್ ಎಸ್ ಮಾಡತಾ ಇದ್ದಾರೆ. ಮಾನವೀಯ ಮೌಲ್ಯಗಳನ್ನ ಕಲಿಸುವ ಸಂಘಟನೆ ಆರ್ ಎಸ್ ಎಸ್ ಆಗಿದೆ ಎಂದು ಬಿಜೆಪಿ ಮುಖಂಡ ಪಾರ್ಲಿಮೆಂಟ್ ಮಾಜಿ ಸದಸ್ಯ ಉಮೇಶ್ ಜಾಧವ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ ಖರ್ಗೆ ಸವಾಲು ಹಾಕಿದ್ದು ಆರ್ ಎಸ್ ಎಸ್ ಕೊಡುಗೆ ಏನು ಅಂತಾ. ನಾನು ಹೇಳತಾ ಇದ್ದೇನೆ ಮಾನವೀಯ ಮೌಲ್ಯ ಕಲಿಸಿಕೊಡುವ ಸಂಘಟನೆ. ಶಿಶ್ತು, ಹಿರಿಯರಿಗೆ ಗೌರವ ಕೊಡುವುದನ್ನೇ ಕಲಿಸುವುದೇ ಆರ್ ಎಸ್ ಎಸ್. ಸರಕಾರದ ಎಲ್ಲ ತಂತ್ರ ಕುತಂತ್ರ ಯೋಜನೆ ಯೋಚನೆ ಉಪ ಯೋಗಿಸಿಕೊಂಡು ಆರ್ ಎಸ್ ಎಸ್ ಅಸಕ್ತ ಮಾಡುವ ಪ್ಲ್ಯಾನ ಇದೆ ಎಂದರು.