ನ್ಯಾಮತಿ: ತಾಲ್ಲೂಕಿನ ವಿವಿಧೆಡೆ ಜಾನುವಾರು ಕದ್ದು ಶಿವಮೊಗ್ಗದ ಮುಕ್ತಿಯಾರ್‌ಗೆ ಮಾರಾಟ, 6 ಜನರ ಬಂಧನ
ಸರಣಿ ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 6 ಜನರನ್ನು ಬಂಧಿಸಿ ಜಾನುವಾರು, ಹಣ ಮತ್ತು ಕೃತ್ಯಕ್ಕೆ ಬಳಸಿದ 2 ವಾಹನಗಳನ್ನು ನ್ಯಾಮತಿ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕೋಟೆಹಾಳ್ ವೆಂಕಟೇಶ್ವರ ನಗರ ಗ್ರಾಮದ ಮೋಹನ, ಚೀಲೂರು ಕಡಕಟ್ಟೆಯ ನಾಗರಾಜ ನಾಯ್ಕ (28), ಚೀಲೂರು ಗ್ರಾಮದ ಮನ್ಸೂರ್ (35) ದೊಡ್ಡೇರಿ ಗ್ರಾಮದವರಾದ ಆಟೋ ಚಾಲಕ ಕುಶಾಲ್ (25), ಅಮಿತ್ (26) ಗಡೇಕಟ್ಟೆಯ ಪ್ರವೀಣ್ (28) ಬಂಧಿತ ಆರೋಪಿಗಳು.