ಆಳಂದ: ಇಬ್ಬರ ಬಂಧಿಸಿ ₹53 ಸಾವಿರ ಮೌಲ್ಯದ ಗಾಂಜಾ ಜಪ್ತಿ: ಆಳಂದ ಪೊಲೀಸರ ಕಾರ್ಯಾಚರಣೆ
ಆಳಂದ ಪಟ್ಟಣದ ಎಪಿಎಂಸಿ ಆವರಣದಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಆಳಂದ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಕುನಸಾವಳಗಿ ಗ್ರಾಮದ ಅರ್ಜುನ ಸಿಂದೆ (45) ಹಾಗೂ ಹೆಬ್ಬಳಿ ಗ್ರಾಮದ ಜೀವನ್ ದೇಡೆ (25) ಬಂಧಿತ ಆರೋಪಿಗಳು. ಇವರಿಂದ ಪೊಲೀಸರು 53 ಸಾವಿರ ರೂಪಾಯಿ ಮೌಲ್ಯದ 503 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ಮಂಗಳವಾರ ಮೂರು ಗಂಟೆಗೆ ಮಾಹಿತಿ ಲಭ್ಯವಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಶರಣಬಸಪ್ಪ ಕೋಡ್ಲಾ ನೇತೃತ್ವದ ತಂಡ ದಾಳಿ ನಡೆಸಿತು.