ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿ ಅಕ್ಕ ಪಡೆ ವಾಹನಕ್ಕೆ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಚಾಲನೆ ನೀಡಿದ್ದಾರೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ಅಪಾಯದಲ್ಲಿರುವ ಹಾಗೂ ಸಂಕಷ್ಟದಲ್ಲಿರುವ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ತಕ್ಷಣವೆ ನೆರವು ನೀಡಿ ರಕ್ಷಣೆ ಒದಗಿಸುವ ಅಕ್ಕ ಪಡೆಯ ವಿಶೇಷ ಪೊಲೀಸ್ ಗಸ್ತು ವಾಹನಕ್ಕೆ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದು ಮಹಿಳೆಯರ ರಕ್ಷಣೆಗಾಗಿ ಈ ಒಂದು ಅಕ್ಕ ಪಡೆಯನ್ನ ನಿರ್ಮಾಣ ಮಾಡಿದ್ದು ಚಾಲನೆ ನೀಡಲಾಯಿತು