ಕಲಬುರಗಿ : ಇನ್ಶುರೆನ್ಸ್ ಹಣದ ಆಸಗೆ ಬಿದ್ದು ಕಲಬುರಗಿ ನಗರದ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹18.33 ಲಕ್ಷ ಹಣ ಕಳೆದುಕೊಂಡ ಘಟನೆ ನಡೆದಿದೆ.. ಡಿ28 ರಂದು ಬೆಳಗ್ಗೆ 10 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಫ್ಯಾಬ್ರಿಕೆಶನ್ ಬ್ಯುಸಿನೆಸ್ ಮಾಡ್ತಿದ್ದ ನಗರದ ರಮೇಶಭಾಯಿ ಎಂಬುರಿಗೆ ಸೈಬರ್ ವಂಚಕರು ಕರೆ ಮಾಡಿ ನಿಮಗೆ ಇನ್ಶುರೆನ್ಸ್ ಹಣ ಕ್ಲೇಮ್ ಆಗಿದೆ.. ನೀವು ನಿಮ್ಮ ಹಣದಲ್ಲಿ ಬಿಟ್ ಕಾಯಿನ್ ಖರೀಧಿ ಮಾಡಿದ್ರೆ ಹೆಚ್ಚು ಲಾಭ ಬರುತ್ತೆ ಅಂತಾ ನಂಬಿಸಿ ಹಂತ ಹಂತವಾಗಿ ರಮೇಶಭಾಯಿಂದ ಸೈಬರ್ ವಂಚಕರು ₹18.33 ಲಕ್ಷ ಹಣ ಹಾಕಿಸಿಕೊಂಡು ವಂಚಿಸಿದ್ದಾರೆ.. ಈ ಬಗ್ಗೆ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ