ಯಲ್ಲಾಪುರ: ಟಿಎಂಎಸ್ ಆಡಳಿತ ಮಂಡಳಿಗೆ ಚುನಾವಣೆ,ಮತ ಎಣಿಕೆಗೆ ತಡೆಯಾಜ್ಞೆ
ಯಲ್ಲಾಪುರ : ಸಹಕಾರಿ ಸಂಸ್ಥೆ ಟಿಎಂಎಸ್ ಆಡಳಿತ ಮಂಡಳಿ ಆಯ್ಕೆಗೆ ಸೆ 28 ರಂದು ಚುನಾವಣೆ ನಡೆಯಿತು. ತಾಲೂಕಿನ ವಿವಿಧೆಡೆಯಿಂದ ಸಂಘದ ಸಾವಿರಾರು ಸದಸ್ಯರು ಬಂದು ಉತ್ಸಾಹದಿಂದ ಮತ ಚಲಾಯಿಸಿದರು. ಒಟ್ಟು 14 ಸ್ಥಾನಗಳಲ್ಲಿ 12 ಸ್ಥಾನಗಳಿಗೆ ಚುನಾವಣೆ ನಡೆಯಿತು. ಹಿಂದುಳಿದ ಬ ವರ್ಗ ಹಾಗೂ ಪರಿಶಿಷ್ಟ ಜಾತಿಯ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಮತ ಎಣಿಕೆ ಸೆ 28 ರಂದೇ ನಡೆಯಬೇಕಿಂದಿದ್ದರೂ ನ್ಯಾಯಾಲಯದ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಮತ ಎಣಿಕೆ ನಡೆಯದೇ ಮತ ಪೆಟ್ಟಿಗೆಯಲ್ಲಿ ಭದ್ರವಾಗಿ ಉಪ ಖಜಾನೆಯ ಕಚೇರಿಯಲ್ಲಿ ಇರಿಸಲಾಗಿದೆ. ನ್ಯಾಯಾಲಯದ ಆದೇಶ ಬಂದ ಬಳಿಕ ಮತ ಎಣಿಕೆ ನಡೆಯಲಿದೆ.