ಯಲ್ಲಾಪುರ: ಯಲ್ಲಾಪುರ,
ನವರಾತ್ರಿ ನಿಮಿತ್ತ ಶ್ರೀ ಗ್ರಾಮದೇವಿ ದೇವಾಲಯದಲ್ಲಿ ಶಾಸಕ ಹೆಬ್ಬಾರರಿಂದ ಅನ್ನಸಂತರ್ಪಣೆ ಸೇವೆ
ಯಲ್ಲಾಪುರ, ನವರಾತ್ರಿಯ ಅಂಗವಾಗಿ ಶ್ರೀ ಗ್ರಾಮದೇವಿ ದೇವಾಲಯದಲ್ಲಿವಿಶೇಷ ಪೂಜೆ ಅನ್ನಸಂತರ್ಪಣಾ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಸ್ವತಃ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಾಧಿಗಳಿಗೆ ಅನ್ನಪ್ರಸಾದ ವಿತರಿಸಿದರು. ಜನರೊಂದಿಗೆ ಬೆರೆತು ಸೇವೆ ಸಲ್ಲಿಸಿದ ಅವರ ಸರಳತೆ ಭಕ್ತರ ಪ್ರಶಂಸೆ ಪಾತ್ರವಾಗಿದೆ. ,ಅ 2 ವಿಜಯದಶಮಿಯವರೆಗೆ ವಿಶೇಷ ಪೂಜೆ ನಡೆಯಲಿವೆ. ಪ್ರತಿದಿನ ರಾತ್ರಿ 8.30 ರಿಂದ ಶಿರಸಿಯ ವಿದ್ವಾನ್ ನಾರಾಯಣದಾಸ ಅವರಿಂದ ಹರಿಕೀರ್ತನೆ ಕಾರ್ಯಕ್ರಮ ನಡೆಯಲಿವೆ. ನವರಾತ್ರಿ ಪ್ರಯುಕ್ತ ಶ್ರೀದೇವಿಯರಿಗೆ ಆಭರಣ ತೊಡಿಸಿ ಸರ್ವಾಲಂಕಾರ ಮಾಡಲಾಗಿದೆ. ದೇವಸ್ಥಾನವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ.