ಜಮಖಂಡಿ: ಶೂರ್ಪಾಲಿ ಗ್ರಾಮದ ಕೃಷ್ಣ ನದಿ ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಿದ ರಕ್ಷಣಾ ಪಡೆ, ಅಂದ ಹಾಗೆ ಇದು ಅಣಕು ಪ್ರದರ್ಶನ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕೃಷ್ಣಾ ತೀರದ ಶೂರ್ಪಾಲಿ ಗ್ರಾಮದಲ್ಲಿ ಪ್ರವಾಹ ಸಂದರ್ಭದಲ್ಲಿ ಗ್ರಾಮಸ್ಥರ ಹಾಗೂ ಜಾನುವಾರು ಕ್ಷಣೆಗಾಗಿ ನಡೆಸಲಾಗುವ ಕಾರ್ಯಚರಣೆಯ ಅಣಕು ಪ್ರದರ್ಶನ ಜರುಗಿತು. ತಾಲೂಕಾಡಳಿ,ತಾಲೂಕು ಪಂಚಾಯಿತಿ,ಪೋಲಿಸ್ ಇಲಾಖೆ, ಅಗ್ನಿ ಶಾಮಕದಳ, ಜಿಲ್ಲಾ ವಿಪತ್ತು ನಿರ್ವಹಣಾ (ಎನ್‌ಡಿಆರ್‌ಎಫ್) ತಂಡ,ಆರೋಗ್ಯ ಇಲಾಖೆ,ಸಮಾಜ ಕಲ್ಯಾಣ ಇಲಾಖೆ,ಪಶುಪಾಲನೆ ಇಲಾನೆ ಸೇರಿದಂತೆ ವಿವಿಧ ಇಲಾಖೆಗಳು ಪ್ರವಾಹದ ಸಂದರ್ಭದಲ್ಲಿ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳು, ನಿರ್ವಹಣೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.