ಶಿರಸಿ: ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕದ ಕುರಿತು ಬಿಜೆಪಿ ಹಾಗೂ ಸಂಸದರು ಉತ್ತರಿಸಲಿ: ನಗರದಲ್ಲಿ ಸಚಿವ ಮಂಕಾಳು ವೈದ್ಯ
ಶಿರಸಿ : ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕದ ಕುರಿತು ಬಿಜೆಪಿಯವರು ಹಾಗೂ ಸಂಸದರು ಉತ್ತರ ನೀಡಬೇಕು ಎಂದು ಮೀನುಗಾರಿಕೆ, ಬಂದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು. ಅವರು ಭಾನುವಾರ ನಗರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಪ್ರಕೃತಿ ವಿಕೋಪದಿಂದ ಹಾನಿ ಸಂಭವಿಸಿದ್ದಲ್ಲಿ ತಕ್ಷಣ ಪರಿಹಾರ ನೀಡಲು ತಹಸೀಲ್ದಾರ ಖಾತೆಯಲ್ಲಿ ೫೦ ಲಕ್ಷ ರೂ., ಜಿಲ್ಲಾಧಿಕಾರಿ ಖಾತೆಯಲ್ಲಿ ೪ ಕೋಟಿ ರೂ. ಹಣ ಇದೆ. ಹಣದ ಕೊರತೆಯಿಲ್ಲ ಎಂದರು.