ಶಿರಸಿ :ನಗರದ ಹುಬ್ಬಳ್ಳಿ ರಸ್ತೆಯ ಚಿಪಗಿ ಚೆಕ್ ಪೋಸ್ಟ ಸಮೀಪ ನಿಲ್ಲಿಸಲಾಗಿದ್ದ ಮಿನಿ ಲಾರಿಯೊಂದು ಕಳವು ಆಗಿದೆ.ಈ ಸ್ಥಳದಲ್ಲಿ ಸ್ಕೂಟಿ ಒಂದು ಬಿಟ್ಟು ಹೋಗಲಾಗಿದ್ದು ಘಟನೆಯ ಕುರಿತು ತನಿಖೆಯಿಂದ ತಿಳಿದುಬರಬೇಕಿದೆ ಅಶೋಕ ಲೇಲ್ಯಾಂಡ್ ದೋಸ್ತ (KA-31 A 3695) ವಾಹನವನ್ನು ಕಳ್ಳರು ಕದ್ದುಕೊಂಡುಹೋಗಿದ್ದಾರೆ. ಕಾರ್ತಿಕ್ ಕುಮಾರ ಹುಡೈದ್ ಇವರಿಗೆ ಸೇರಿದ ವಾಹನವೇ ಕಳ್ಳತನವಾಗಿದೆ. ಗ್ರಾಪಂ ಸದಸ್ಯ ನವೀನ ಶೆಟ್ಟಿ ಈ ಬಗ್ಗೆ ಪೋಲಿಸರ ಗಮನಕ್ಕೆ ತಂದು ತನಿಖೆಗೆ ಆಗ್ರಹಿಸಿದ್ದಾರೆ.