ಬೆಂಗಳೂರು ದಕ್ಷಿಣ: ಮಾಜಿ ಸಿಎಂ ಸದಾನಂದಗೌಡ ಬ್ಯಾಂಕ್ ಖಾತೆಗಳ ಹ್ಯಾಕ್: 3 ಲಕ್ಷ ರೂ ದೋಚಿದ ಸೈಬರ್ ಕಳ್ಳರು
ಮಾಜಿ ಸಿಎಂ ಸದನಾಂದ ಗೌಡ ಅವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಸೈಬರ್ ಕಳ್ಳರು 3 ಲಕ್ಷ ರೂ ಹಣವನ್ನು ಕದ್ದಿದ್ದಾರೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ 75 ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ, 75 ಪೌರ ಕಾರ್ಮಿಕರರಿಗೆ ಆರ್ಎಂವಿ ಎಕ್ಸ್ ಟೆನ್ಷನ್ನ ಬಿಬಿಎಂಪಿ ಪಾರ್ಕ್ನಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಸದಾನಂದ ಗೌಡ ಮಾಧ್ಯಮಗಳ ಜೊತೆ ಮಾತನಾಡಿ, ಮಂಗಳವಾರ ನನ್ನ 3 ಅಕೌಂಟ್ ಹ್ಯಾಕ್ ಮಾಡಿದ್ದಾರೆ. ಅದರಲ್ಲಿದ್ದ ತಲಾ ಒಂದೊಂದು ಲಕ್ಷ ಹಣ ಎಗರಿಸಿದ್ದಾರೆ. ಸುಮಾರು 3 ಲಕ್ಷ ರೂ. ಹಣ ಹೋಗಿದೆ ಎಂದು ತಿಳಿಸಿದರು. ಹೆಚ್ಡಿಎಫ್ಸಿ, ಎಸ್ಬಿಐ ಹಾಗೂ ಆಕ್ಸಿಸ್ ಬ್ಯಾಂಕಿನ ಖಾತೆಯಲ್ಲಿದ್ದ ಹಣ ಕಳ್ಳತನವಾಗಿದೆ. ಯುಪಿಐ ಮೂಲಕ ಹ್ಯಾಕ್ ಮಾಡಿ ಹಣ ಕಳ್ಳತನ ಮಾಡಿದ್ದು