ಯುಗಾದಿ ಹಬ್ಬದ ಅಂಗವಾಗಿ ಜನಧ್ವನಿ ಫೌಂಡೇಶನ್ ವತಿಯಿಂದ ಗೋ ಶಾಲೆಯಲ್ಲಿ ಗೋವುಗಳಿಗೆ ಬಾಳೆ ಹಣ್ಣು ಹಾಗೂ ಬೆಲ್ಲ ಇನ್ನಿತರ ಆಹಾರ ಪದಾರ್ಥಗಳನ್ನು ಗೋವುಗಳಿಗೆ ತಿನ್ನಿಸುವ ಮೂಲಕ ವಿಶೇಷವಾಗಿ ಮಂಗಳವಾರ ಮಧ್ಯಾಹ್ನ ಎರಡರ ವೇಳೆಯಲ್ಲಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಫೌಂಡೇಶನ್ ಅಧ್ಯಕ್ಷ ವಕೀಲ ಆಯರಹಳ್ಳಿ ಪ್ರವೀಣ್ ಅವರು ಗೋವುಗಳು ದೇವರ ಸ್ವರೂಪ ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಿ ರೈತರ ಮೊಗದಲ್ಲಿ ಹರ್ಷೋದಾರ ಮೂಡಲಿ ಎಂದು ಗೋಪೂಜೆ ಮಾಡುವ ಮೂಲಕ ಯುಗಾದಿ ಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಫೌಂಡೇಶನ್ ಕಾರ್ಯದರ್ಶಿ ಭಾಸ್ಕರ್, ಗೌರವಾಧ್ಯಕ್ಷರಾದ ಸುನೀಲ್, ಖಜಾಂಚಿ ಅಭಿ ನಾಗಮಂಗಲ, ರಾಜು, ಲೋಕೇಶ್, ಗಿರೀಶ್ ಕಾನೂನು ಸಲಹೆಗಾರರಾದ ಪ್ರವೀಣ್ ಸೇರಿದಂತೆ ಮತ್ತಿತರಿದ್ದರು