ಕಲಬುರಗಿ: ಮುತ್ತಗಾ ಗ್ರಾಮದ ಚೌಡಯ್ಯ ಮೂರ್ತಿ ಭಗ್ನದ ಹಿಂದೆ ಬಿಜೆಪಿ ನಾಯಕರ ಕೈವಾಡ: ನಗರದಲ್ಲಿ ಕೆಪಿಸಿಸಿ ಮುಖಂಡ ರಾಜಗೋಪಾಲ್ ರೆಡ್ಡಿ ಆರೋಪ
ಚಿತ್ತಪಿರ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿ ವಿರೂಪಗೊಳಿಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಮ್ಮ ಸಮಾಜದ ಮುಗ್ದರೇ ಈ ಕೃತ್ಯ ಎಸಗಿದ್ದರೂ, ಇದರ ಹಿಂದೆ ಬಿಜೆಪಿ ನಾಯಕರ ಕೈವಾಡ ಇದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್ ರೆಡ್ಡಿ ಆರೋಪ ಮಾಡಿದ್ದಾರೆ. ಕೋಲಿ ಸಮಾಜದ ಮುಖಂಡ ಹಾಗೂ ಬಿಜೆಪಿ ನಾಯಕರಾದ ಅವ್ವಣ್ಣ ಮ್ಯಾಕೇರಿ ಅವರು ಬಂಧಿತರು ನಿರಪರಾಧಿಗಳೆಂದು ಹೇಳುತ್ತಿದ್ದಾರೆ. ಹಾಗಾದರೆ ನಿಜವಾದ ಆರೋಪಿ ಯಾರು ಅನ್ನೋದು ಅವ್ವಣ್ಣ ಮ್ಯಾಕೇರಿ ತೋರಿಸಲಿ ಎಂದು ರೆಡ್ಡಿ ಸವಾಲು ಹಾಕಿದರು.. ನಸುಕಿನ ಜಾವ ಕೃತ್ಯ ನಡೆದಿದ್ದು, ಘಟನೆ ನಡೆದ ತಕ್ಷಣ ಬಂಧಿತ ಆರೋಪಿ ಶಿವರಾಜ ಎಂಬಾತ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರಿ