ನಾಗಮಂಗಲ : ಯಾರೂ ಇಲ್ಲದ ವೇಳೆ ಮನೆಯ ಬಾಗಿಲ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ದೋಚಿ ರುವ ಘಟನೆ ನಾಗಮಂಗಲ ತಾಲ್ಲೂಕಿನ ಮದಲಹಳ್ಳಿ ಗ್ರಾಮದಲ್ಲಿ ಜರುಗಿದೆ. ಈ ಗ್ರಾಮದ ಮಂಜುಳಾ ಕೋ ರಾಘವೇಂದ್ರ ಎಂಬುವರ ಮನೆಯಲ್ಲಿ ಕೃತ್ಯ ಜರುಗಿದ್ದು ಕಳೆದ 5 ರಂದು ಮನೆಯವರೆಲ್ಲ ಊಟಿಗೆ ತೆರಳಿದ್ದ ವೇಳೆ ಮನೆಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ 48 ಗ್ರಾಂ ತೂಕದ 96 ಸಾವಿರ ರೂ ಮೌಲ್ಯದ ಚಿನ್ನಾಭರಣ 19 ಸಾವಿರ ರೂ ಬೆಲೆಯ ಬೆಳ್ಳಿ ಪದಾರ್ಥಗಳು, ಹಾಗೂ 25 ಸಾವಿರ ರೂ ನಗದು ಹಣವನ್ನು ದೋಚಿದ್ದಾರೆ ಎನ್ನಲಾಗಿದೆ.